Yuva 02: ಮೂರು ಬಲಿಷ್ಠ ನಿರ್ಮಾಣ ಸಂಸ್ಥೆಗಳಿಂದ ನಿರ್ಮಾಣವಾಗಳಿದೆ ಯುವ ಅವರ ಎರಡನೇ ಸಿನಿಮಾ

ಮೊದಲ ಸಿನಿಮಾದಲ್ಲೆ ಹಿಟ್ ನೀಡಿದ ಯುವ ರಾಜ್ ಕುಮಾರ್ ಅವರು ಈಗ‌ ತಮ್ಮ ಎರಡನೇ ಸಿನಿಮಾಕ್ಕೆ ತಯಾರಾಗುತ್ತಿದ್ದರೆ. ಯುವ ಸಿನಿಮಾದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ಇವರು ಮೊದಲ ಸಿನಿಮಾದಲ್ಲೇ ಯಶಸ್ಸನ್ನು ಪಡೆದರು. 

ಕೆಲವು ದಿನಗಳಿಂದ ಯುವ ಅವರ ಎರಡನೇ ಸಿನಿಮಾದ ಬಗ್ಗೆ ಬಹಳಷ್ಟು ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ. ಸಿನಿಮಾವನ್ನು ಅಶ್ವಿನಿ ಪುನೀತ್ ರಾಜಕುಮಾರ್ ತಮ್ಮ ನಿರ್ಮಾಣ ಸಂಸ್ಥೆಯಿಂದ ನಿರ್ಮಾಣ ಮಾಡಲಿದ್ದಾರೆ. ಇವರೊಡನೆ ಚಂದನವನದ ಇನ್ನೆರಡು ಬಲಿಷ್ಠ ನಿರ್ಮಾಣ ಸಂಸ್ಥೆಯಾದ 'ಕೆಆರ್ ಜಿ ಸ್ಟುಡಿಯೋ' ಮತ್ತು 'ಜಯಣ್ಣ ಫಿಲ್ಮ್ಸ್' ಕೈ ಜೋಡಿಸಿದ್ದಾರೆ. 

ಪುನೀತ್ ರಾಜಕುಮಾರ್ ಅವರಿಗೆ ಯುವ ರಾಜ್ ಕುಮಾರ್ ಅವರನ್ನು ತಮ್ಮ ಹೋಂ ಬ್ಯಾನರ್ ನಲ್ಲಿ ಬೆಳ್ಳಿತೆರೆಗೆ ಪರಿಚಯಿಸ‌ಬೇಕು ಎನ್ನುವ ಕನಸು ಇತ್ತು. ಅದು ಈಗ ಎರಡನೇ ಸಿನಿಮಾ ಮಾಡುವುದರಿಂದ ನನಸಾಗಿದೆ. 

ಸಿನಿಮಾದ ನಿರ್ದೇಶಕರು ಮತ್ತು ಪಾತ್ರವರ್ಗದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಸಿನಿಮಾದ ಟೈಟಲ್ ಬಗ್ಗೆ ಬಹಳಷ್ಟು ಕುತೂಹಲವಿದೆ. " ಯಕ್ಕ ರಾಜ ರಾಣಿ " ಆಗಿರಬಹುದು ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಈಗಲೇ ಓದಿ: Billa Ranga Baasha: 50 ವರ್ಷ ವಯಸ್ಸಾದರೂ ಸುದೀಪ್ ಅವರು ಎಷ್ಟು ಫಿಟ್ ಆಗಿದ್ದಾರೆ ?

Previous Post Next Post