ಇತ್ತೀಚಿನ ದಿನಗಳಲ್ಲಿ ತುಳು ಸಿನಿಮಾ ತನ್ನದೇ ಆದ ಮೈಲುಗಲ್ಲನ್ನು ಸೃಷ್ಟಿಸುತ್ತಿದೆ. ಹಿಂದೆ ವರ್ಷದಲ್ಲಿ ಮೂರು ನಾಲ್ಕು ಸಿನಿಮಾಗಳು ತುಳುವಿನಲ್ಲಿ ಬಿಡುಗಡೆಯಾಗುತ್ತಿತ್ತು. ಆದರೆ ಈಗ ಪ್ರತಿ ತಿಂಗಳು ಒಂದು ಸಿನಿಮಾ ಬಿಡುಗಡೆಯಾಗುತ್ತಿದೆ. ಬಿಡುಗಡೆಯಾದ ಎಲ್ಲಾ ಸಿನಿಮಾಗಳು ಒಳ್ಳೆಯ ಯಶಸ್ಸನ್ನು ಕಾಣುತ್ತಿದೆ. ಈ ವರ್ಷ ಬಿಡುಗಡೆಯಾದ ಧರ್ಮದೈವ, ಬಲಿಪೆ, ಅನಾರ್ಕಲಿ ,ಗೌಜಿ ಗಮ್ಮತ್ ಒಳ್ಳೆ ಪ್ರತಿಕ್ರಿಯೆಯನ್ನು ಪಡೆದಿದೆ.
ಇತ್ತೀಚಿಗೆ ಓಟಿಟಿ ಯಲ್ಲಿ ಬಿಡುಗಡೆಯಾದ ತುಳು ಸಿನಿಮಾಗಳು:
1) ಸರ್ಕಸ್: ರೂಪೇಶ್ ಶೆಟ್ಟಿ ಅಭಿನಯದ ಮತ್ತು ನಿರ್ದೇಶನದ ಈ ಸಿನಿಮಾ ಕಳೆದ ವರ್ಷ ಜೂನ್ ತಿಂಗಳಲ್ಲಿ ರಿಲೀಸ್ ಆಗಿತ್ತು ಮತ್ತು ಭರ್ಜರಿ ನೂರು ದಿವಸ ಪ್ರದರ್ಶನ ಕಂಡಿತ್ತು. ಒಂದು ವರ್ಷಗಳ ನಂತರ ಇದೀಗ ಓಟಿಟಿ ಫ್ಲ್ಯಾಟ್ ಫಾರ್ಮ್ ಗೆ ಕಾಲಿಟ್ಟಿದೆ. ಈ ಸಿನಿಮಾ ದಲ್ಲಿ ರೂಪೇಶ್ ಶೆಟ್ಟಿ ಅವರ ಜೊತೆಗೆ ರಚನಾ ರೈ, ಭೋಜರಾಜ್ ವಾಮಜೂರು, ಯಶ್ ಶೆಟ್ಟಿ, ನವೀನ್ ಡಿ ಪಡಿಲ್, ಉಮೇಶ್ ಮಿಜಾರ್ ಕಾಣಿಸಿಕೊಂಡಿದ್ದರು. ಈ ಸಿನಿಮಾ ಟಾಕೀಸ್ ಓಟಿಟಿ ಆಪ್ ನಲ್ಲಿ ಲಭ್ಯವಿದೆ.
ವಿದ್ಯಾವಂತ ರಾಹುಲ್, ತನ್ನದೇ ಆದ ಉದ್ಯಮವನ್ನು ಸ್ಥಾಪಿಸಲು ಬಯಸುತ್ತಾನೆ ಮತ್ತು ಅದಕ್ಕಾಗಿ ಹೂಡಿಕೆದಾರರ ಅಗತ್ಯವಿದೆ. ರಾಹುಲ್ ತನ್ನ ವ್ಯಾಪಾರವನ್ನು ಪ್ರಾರಂಭಿಸಲು ತಮ್ಮ ಹಳ್ಳಿಯ ಭೂಮಿಯನ್ನು ಅಡಮಾನದಲ್ಲಿ ಇಡಲು ಬಯಸುತ್ತಾನೆ ಆದರೆ ಅವನ ತಂದೆ ಒಪ್ಪುವುದಿಲ್ಲ. ನಂತರ ಅವನು ಏನು ಮಾಡುತ್ತಾನೆ ಮತ್ತು ಯಾವೆಲ್ಲ ಸಮಸ್ಯೆಗಳನ್ನು ಎದುರಿಸುತ್ತಾನೆ ಎಂಬುದು ಈ ಸಿನಿಮಾದ ಒಂದು ಸಾಲಿನ ಕಥೆಯಾಗಿದೆ.
2) ಬಲಿಪೆ: ಇದು ಒಂದು ಹಾರರ್ ಥ್ರಿಲ್ಲರ್ ಸಿನಿಮವಾಗಿದ್ದು , ಸಿನಿಮಾವನ್ನು ಪ್ರಸಾದ್ ಪೂಜಾರಿ ಆಲ್ವಾ ಅವರು ನಿರ್ದೇಶಿಸಿದ್ದಾರೆ ಮತ್ತು ಹೇಮಂತ್ ಸುವರ್ಣ ಅವರು ನಿರ್ಮಿಸಿದ್ದಾರೆ. ಮುಖ್ಯ ಭೂಮಿಕೆಯಲ್ಲಿ ಅರವಿಂದ್ ಬೋಲಾರ್, ದಯಾನಂದ್ ಕತ್ತಲ್ ಸರ್, ಹರ್ಷಿತ್ ಬಂಗೇರ, ಅಂಕಿತ ಪಟ್ಲ, ಪವಿತ್ರ ಹೆಗ್ಗಡೆ ಹಾಗೂ ಮುಂತಾದವರು ಕಾಣಿಸಿಕೊಂಡಿದ್ದಾರೆ.
ಒಬ್ಬ ಬಡವ ತನ್ನ ಮಗುವನ್ನು ಕಳೆದುಕೊಳ್ಳುತ್ತಾನೆ. ತನ್ನ ಮಗುವಿನ ಸಾವಿಗೆ ವೈದ್ಯರು ಮತ್ತು ನರ್ಸ್ ಕಾರಣ ಎಂದು ತಪ್ಪಾಗಿ ನಂಬಿದ ಅವನು ಅವರನ್ನು ಕೊಲ್ಲಲು ಮುಂದಾಗುತ್ತಾನೆ. ಅವನು ಯಶಸ್ವಿಯಾಗುತ್ತಾನೆಯೇ? ಎಂಬುದು ಈ ಸಿನಿಮಾದ ಒಂದು ಸಾಲಿನ ಕಥೆಯಾಗಿದೆ. ಈ ಸಿನಿಮಾ ಟಾಕಿಸ್ ಓಟಿಟಿ ಆಪ್ ನಲ್ಲಿ ಲಭ್ಯವಿದೆ.
3) ತುಡರ್: ಇದು ಒಂದು ತ್ರಿಲ್ಲರ್ ಸಿನಿಮಾ ವಾಗಿದ್ದು, ಎಲ್ಟನ್ ಮಾಸ್ಕರೆಂಹಸ್ (Elton Mascarenhas) ಮತ್ತು ತೇಜಸ್ ಪೂಜಾರಿ ನಿರ್ದೇಶಿಸಿದ್ದಾರೆ. ಸಿನಿಮಾಕ್ಕೆ ವಿಲ್ಸನ್ ರೆಬೆಲ್ಲೊ (Wilson Rebello) ಅವರು ಬಂಡವಾಳ ಹೂಡಿದ್ದಾರೆ. ಸಿನಿಮಾದಲ್ಲಿ ಸಿದ್ದಾರ್ಥ್ ಹೆಚ್ ಶೆಟ್ಟಿ, ದೀಕ್ಷಾ ಭಿಸೆ (Deeksha Bhise), ಅರವಿಂದ್ ಬೋಲರ್, ರೂಪ ವರ್ಕಡಿ (Roopa Vorkady), ಅನ್ವಿತಾ ಸಾಗರ್ ಹಾಗೂ ಹಲವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಅಶುಭ ಘಟನೆಗಳು ಆಕಾಂಕ್ಷಾ ಕುಟುಂಬವನ್ನು ಕಾಡಿದಾಗ, ಆಕಾಶ್ ಅವರ ಮೂಲವನ್ನು ಕಂಡುಕೊಳ್ಳುತ್ತಾನೆ. ಇದು ದೇವತೆಯ ಕ್ರೋಧವೋ, ಶಾಪದ ಪರಂಪರೆಯೋ ಅಥವಾ ಮಾನವ ಕೈಯ ಕುತಂತ್ರವೋ? ಎಂಬುದು ಈ ಸಿನಿಮಾದ ಒಂದು ಸಾಲಿನ ಕಥೆಯಾಗಿದೆ. ಈ ಸಿನಿಮಾ ಅಕ್ಟೋಬರ್ 11ರಿಂದ ಟಾಕಿಸ್ ಆಪ್ ನಲ್ಲಿ ಸ್ಟ್ರೀಮ್ ಆಗಲಿದೆ.
ತುಳುವಿನಲ್ಲಿ ಇತ್ತೀಚಿನ ದಿನಗಳಲ್ಲಿ ಒಳ್ಳೆಯ ಕಥೆಯನ್ನು ಮತ್ತು ದೃಶ್ಯವನ್ನು ಹೊಂದಿರುವ ಸಿನಿಮಾಗಳು ತೆರೆ ಕಾಣುತ್ತಿವೆ.